ಬೇಕಾಗುವ ಸಾಮಾಗ್ರಿಗಳು : -ಕಿತ್ತಳೆ ಹಣ್ಣಿನ ಸಿಪ್ಪೆ - 1 ಕಿತ್ತಳೆಯದ್ದು
ಒಣ ಮೆಣಸು - 5
ಉದ್ದಿನ ಬೇಳೆ - 4 ಚಮಚ
ಕಡ್ಲೆಬೇಳೆ - 4 ಚಮಚ
ಉಪ್ಪು - 1 ಚಮಚ
ಹುಳಿಪುಡಿ - 1 ಚಮಚ
ಮಾಡುವ ವಿಧಾನ : -
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಸಣ್ಣಗೆ ಹಚ್ಚಿ ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಅದರ ನೀರಿನ ಅಂಶ ಹೋಗುವ ತನಕ ಹುರಿಯಿರಿ. ನಂತರ ಒಣಮೆಣಸು, ಉದ್ದಿನಬೇಳೆ ಮತ್ತು ಕಡ್ಲೆಬೇಳೆಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ಈಗಾಗಲೇ ಹುರಿದಿಟ್ಟ ಕಿತ್ತಳೆ ಸಿಪ್ಪೆಯೊಂದಿಗೆ ಹಾಕಿ. ಇದಕ್ಕೆ ಉಪ್ಪು ಮತ್ತು ಹುಳಿ ಪುಡಿಗಳನ್ನು ಸೇರಿಸಿ ಇವೆಲ್ಲವನ್ನೂ ಒಟ್ಟಿಗೆ ಮಿಕ್ಸಿಗೆ ಹಾಕಿ ತರಿತರಿಯಾಗಿರುವಂತೆ ಪುಡಿ ಮಾಡಿ. ಈಗ ಕಿತ್ತಳೆಸಿಪ್ಪೆ ಚಟ್ನಿಪುಡಿ ರೆಡಿ. ಇದನ್ನು ಒಂದು ಬಾಟಲಿಯಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಿಡಿ. 15 ದಿನವಿಟ್ಟರೂ ಹಾಳಾಗುವುದಿಲ್ಲ. ತಯಾರಿಸಲು ತುಂಬಾ ಸುಲಭ ಹಾಗೂ ತಗಲುವ ವೆಚ್ಚವೂ ಕಡಿಮೆ. ಈ ಚಟ್ನಿಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಕಲಸಿ ಬಳಸಬೇಕು. ತುಂಬಾ ಟೇಸ್ಟಿಯಾಗಿರುತ್ತದೆ. ಇಡ್ಲಿ, ದೋಸೆಗಳೊಂದಿಗೆ ತಿನ್ನಲು ರುಚಿ.
1 comments so far
Super tasty.
EmoticonEmoticon