ಬಟಾಟೆ ಪೋಡಿ
ಬೇಕಾಗುವ ಸಾಮಗ್ರಿಗಳು: -
ಬಟಾಟೆ - 4
ಕಡ್ಲೆ ಹಿಟ್ಟು- 100 ಗ್ರಾಮ್
ಅಕ್ಕಿ ಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಇಂಗು ಸ್ವಲ್ಪ
ಮೆಣಸಿನ ಹುಡಿ - 1 ಚಮಚ
ಎಣ್ಣೆ - 2 ಕಪ್
ಮಾಡುವ ವಿಧಾನ: -
ಬಟಾಟೆಯನ್ನು ಚೆನ್ನಾಗಿ ತೊಳೆದು ತೆಳುವಾಗಿ ಚಿಪ್ಸ್ ಆಕಾರದಲ್ಲಿ ಕತ್ತರಿಸಿಡಿ. ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಮೆಣಸಿನ ಹುಡಿ ಹಾಗೂ ಇಂಗು ಇವುಗಳನ್ನು ಸ್ವಲ್ಪ ನೀರು ಬೆರೆಸಿ ಕಲಸಿಡಿ. ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಒಲೆಯ ಮೇಲಿಡಿ .ಕತ್ತರಿಸಿದ ಬಟಾಟೆಯನ್ನು ಒಂದೊಂದಾಗಿ ತೆಗೆದು ಈಗಾಗಲೇ ಕಲಸಿ ಇಟ್ಟಿರುವ ಹಿಟ್ಟಿಗೆ ಮುಳುಗಿಸಿ ಎಣ್ಣೆ ಕಾದ ನಂತರ ಅದರಲ್ಲಿ ಬಿಡಿ. ಎರಡು ಕಡೆಯೂ ಸರಿಯಾಗಿ ಕಾಯುವಂತೆ ಮಗುಚುತ್ತಾ ಇರಿ. ಬಂಗಾರದ ಬಣ್ಣ ಬಂದಾಗ ತೆಗೆದು ಇನ್ನೊಂದು ತಟ್ಟೆಗೆ ಹಾಕಿ. ಈಗ ಬಟಾಟೆ ಪೋಡಿ ರೆಡಿಯಾಗಿದೆ. ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ರುಚಿ.









