ಬೇಕಾಗುವ ಸಾಮಾಗ್ರಿಗಳು : -ಬೋಂಬೆ ರವೆ – 1 ಲೋಟ
ಸಕ್ಕರೆ – 1 ಲೋಟ
ಏಲಕ್ಕಿ ಪುಡಿ – 2 ಚಿಟಿಕೆ
ತುಪ್ಪ – 1 ಲೋಟ
ಗೋಡಂಬಿ - 1 ಹಿಡಿ
ಕೇಸರಿ ಬಣ್ಣದ ಹುಡಿ – 1 ಚಮಚ
ಮಾಡುವ ವಿಧಾನ : -
ಒಂದು ಬಾಣಲೆಗೆ 4 ಚಮಚ ತುಪ್ಪ ಹಾಕಿ ಬೋಂಬೆ ರವೆಯನ್ನು ಹುರಿಯಿರಿ. ಹುರಿದ ನಂತರ 2 ಲೋಟ ನೀರು ಹಾಗೂ ಕೇಸರಿ ಬಣ್ಣದ ಹುಡಿ ಹಾಕಿ ಬೇಯಿಸಿ. ನಂತರ ಸಕ್ಕರೆ ಹಾಕಿ ಮಗುಚುತ್ತಾ ಇರಿ. ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿಗಳನ್ನು ಹಾಕಿ ಮಗುಚಿರಿ. ಇದು ಗಟ್ಟಿಯಾಗುತ್ತಾ ಬಂದಾಗ ತುಪ್ಪ ಹಾಕಿ ಮಗುಚಿ ಗಟ್ಟಿಯಾದಾಗ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ಈಗ ರುಚಿಯಾದ ಶಿರಾ ತಿನ್ನಲು ರೆಡಿ. (ಕೇಸರಿ ಬಣ್ಣದ ಹುಡಿ ಹಾಕದಿದ್ದರೂ ಆಗುತ್ತದೆ. ಬಣ್ಣ ಇರುವುದಿಲ್ಲ ಅಷ್ಟೆ)
ಶಿರಾ ತಯಾರಿಸುವಾಗ ಇದಕ್ಕೆ ಅನನಾಸು ಹಣ್ಣನ್ನು ಸಣ್ಣಗೆ ಹಚ್ಚಿ ಹಾಕಿದರೆ ಇನ್ನೊಂದು ರುಚಿಯ ಸುವಾಸನೆ ಭರಿತ ಶಿರಾ ರೆಡಿಯಾಗುತ್ತದೆ.
ತುಪ್ಪ ಹಾಕಿ ಹುರಿದ ಬೋಂಬೆ ರವೆಗೆ ನೀರಿನ ಬದಲು ಹಾಲು ಹಾಕಿ ಬೇಯಿಸಿ ಬಾಳೆಹಣ್ಣನ್ನು ಸಣ್ಣಗೆ ಹಚ್ಚಿ ಹಾಕಿ ಸಕ್ಕರೆ, ಏಲಕ್ಕಿ, ತುಪ್ಪ ಹಾಕಿ ಮಗುಚಿದರೆ ಇದು ಸತ್ಯನಾರಾಯಣ ಪೂಜೆಗೆ ತಯಾರಿಸುವ ಸಪಾದ ಭಕ್ಷ್ಯ ವಾಗುತ್ತದೆ.
ಅತ್ಯಂತ ಸರಳ ವಿಧಾನದಲ್ಲಿ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದ ಈ ಸಿಹಿ ತಿನಿಸನ್ನು ನೀವೂ ತಯಾರಿಸಿ ನೋಡಿ. ನಿಮ್ಮ ಸ್ನೇಹಿತರಿಗೂ ತಿಳಿಸಿ.
EmoticonEmoticon