ಬೇಕಾಗುವ ಸಾಮಾಗ್ರಿಗಳು : -ಎಳೆ ಹಲಸಿನ ಕಾಯಿ - 1
ತೆಂಗಿನಕಾಯಿ ತುರಿ - 2 ಕಪ್
ಒಣಮೆಣಸು - 5
ಜೀರಿಗೆ - 2 ಚಿಟಿಕೆ
ಉಪ್ಪು - ರುಚಿಗೆ ಬೇಕಷ್ಟು
ಅರಶಿನದ ಪುಡಿ - ಸ್ವಲ್ಪ
ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು, ಉದ್ದಿನಬೇಳೆ.
ಮಾಡುವ ವಿಧಾನ :-
ಹಲಸಿನ ಕಾಯಿಯನ್ನು ಸಿಪ್ಪೆ ತೆಗೆದು ಸಾಂಬಾರಿಗೆ ಬೇಕಾಗುವಷ್ಟು ದೊಡ್ಡ ಗಾತ್ರದ ಹೋಳುಗಳನ್ನಾಗಿ ಮಾಡಿ ಒಂದು ಪಾತ್ರೆಗೆ ಹಾಕಿ ಇದಕ್ಕೆ ನೀರು, ಅರಶಿನದ ಹುಡಿ, ಉಪ್ಪು, ಹುಣಿಸೆ ಹುಳಿ ಹಾಕಿ ಬೇಯಲು ಇಡಿ. ಈಗ ತೆಂಗಿನಕಾಯಿ ತುರಿಯನ್ನು ಮಿಕ್ಸಿಗೆ ಹಾಕಿ ಇದಕ್ಕೆ ಹಸಿಜೀರಿಗೆ ಮತ್ತು ಹುರಿದ ಒಣಮೆಣಸನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಲಸಿನಕಾಯಿಯ ಹೋಳು ಬೆಂದ ನಂತರ ರುಬ್ಬಿಟ್ಟ ಮಸಲೆಯನ್ನು ಅದಕ್ಕೆ ಸೇರಿಸಿ ಕುದಿಸಿರಿ. ನಂತರ ಒಗ್ಗರಣೆ ಹಾಕಿ ಮುಚ್ಚಿಡಿ.
ಎಲ್ಲಾ ವಿಧಾನಗಳು ಮೇಲಿನಂತೆಯೇ ಆದರೆ 1 ಕಪ್ ತೊಗರಿ ಬೇಳೆಯನ್ನು ಬೇಯಿಸಿ ಹಲಸಿನಕಾಯಿ ಕಡಿಯೊಂದಿಗೆ ಹಾಕಿ ಬೇಯಿಸಿ. ನಂತರ ಉಪ್ಪು, ಹುಳಿ, ಅರಸಿನ ರುಬ್ಬಿಟ್ಟ ಮಸಾಲೆ ಇವೆಲ್ಲವನ್ನೂ ಹಾಕಿ ಕುದಿಸಿರಿ ಹಾಗೂ ಒಗ್ಗರಣೆ ಕೊಟ್ಟು ಮುಚ್ಚಿಡಿ.
ನಿಮ್ಮವರೊಂದಿಗೆ ಶೇರ್ ಮಾಡಿ.
1 comments so far
Very very tasty.
EmoticonEmoticon