ಬೇಕಾಗುವ ಸಾಮಾಗ್ರಿಗಳು : -ಟೊಮೇಟೊ - 4
ಹಸಿಮೆಣಸು - 2
ಈರುಳ್ಳಿ - 1
ಶುಂಠಿ - ಸಣ್ಣ ತುಂಡು
ಕೊತ್ತಂಬರಿ ಸೊಪ್ಪು - ಎರಡು ಎಸಳು
ಇಂಗು - ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಮೊಸರು - 1 ಲೋಟ
ಮಾಡುವ ವಿಧಾನ : -
ಟೊಮೇಟೊ, ಈರುಳ್ಳಿ, ಹಸಿಮೆಣಸು, ಶುಂಠಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಸಣ್ಣಗೆ ಹಚ್ಚಿ ಒಂದು ಪಾತ್ರೆಗೆ ಹಾಕಿಡಿ. ಇದಕ್ಕೆ ಉಪ್ಪು, ಇಂಗು ನೀರು ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆ, ಸಾಸಿವೆ, ಮೆಣಸು, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ಕೊಟ್ಟು ಮುಚ್ಚಿಡಿ. ಈಗ ಅತಿ ಸರಳ ವಿಧಾನದ ಟೊಮೇಟೊ ಸಲಾಡ್ ರೆಡಿ. ಇದನ್ನು ಪುಲಾವ್‍ನೊಂದಿಗೆ ತಿನ್ನಲು ಬಳಸಬಹುದು. ಅನ್ನದೊಂದೊಂದಿಗೂ ಬೆರೆಸಿ ತಿನ್ನಲು ರುಚಿಯಾಗಿರುತ್ತದೆ.
ಟೊಮೇಟೊ ಬದಲು ಎಳೆ ಮುಳ್ಳುಸೌತೆಯನ್ನು ಸಣ್ಣಗೆ ಹಚ್ಚಿ ಹಾಕಿಯೂ ಮಾಡಬಹುದು. ಟೊಮೇಟೊ ಮತ್ತು ಮುಳ್ಳುಸೌತೆ ಇವೆರಡನ್ನು ವಿಶ್ರಮಾಡಿ ಮಾಡಿದರೂ ರುಚಿಯಾಗುತ್ತದೆ. ಇದರೊಂದಿಗೆ ಮೊಳಕೆ ಬರಿಸಿದ ಇಡಿ ಹೆಸರುಕಾಳನ್ನು ಬೆರೆಸಿದರೆ ಇನ್ನೂ ರುಚಿ ಮತ್ತು ಆರೋಗ್ಯಕರ.
ನೀವೂ ಮಾಡಿ ನೋಡಿ. ಇತರರೊಂದಿಗೂ ಹಂಚಿಕೊಳ್ಳಿ.
3 comments
Awesommmmmmmmeee😋😋😋
Awesommmmmmmmeee😋😋😋
Super tsstee.
EmoticonEmoticon