ಬೇಕಾಗುವ ಸಾಮಾಗ್ರಿಗಳು: -

ತರಕಾರಿ :-
ಅನನಾಸು ಅಥವಾ ಅಂಬಟೆಕಾಯಿ ಅಥವಾ ಮಾವಿನಕಾಯಿ
ತೆಂಗಿನ ಕಾಯಿ - 1 ಕಡಿ
ಒಣಮೆಣಸು - 4
ಉದ್ದಿನಬೇಳೆ - 4 ಚಮಚ
ಕಪ್ಪುಎಳ್ಳು - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ದೊಡ್ಡ ಲಿಂಬೆ ಗಾತ್ರದಷ್ಟು

ತರಕಾರಿ :-
ಅನನಾಸು ಅಥವಾ ಅಂಬಟೆಕಾಯಿ ಅಥವಾ ಮಾವಿನಕಾಯಿ
ತೆಂಗಿನ ಕಾಯಿ - 1 ಕಡಿ
ಒಣಮೆಣಸು - 4
ಉದ್ದಿನಬೇಳೆ - 4 ಚಮಚ
ಕಪ್ಪುಎಳ್ಳು - 2 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಬೆಲ್ಲ - ದೊಡ್ಡ ಲಿಂಬೆ ಗಾತ್ರದಷ್ಟು
ಒಗ್ಗರಣೆಗೆ:- ಸಾಸಿವೆ, ಮೆಣಸು, ಉದ್ದಿನಬೇಳೆ, ಎಣ್ಣೆ, ಕರಿಬೇವುಸೊಪ್ಪು
ಮಾಡುವ ವಿಧಾನ: -
ಅನನಾಸು (ಪೈನಾಪಲ್), ಅಂಬಟೆಕಾಯಿ ಅಥವಾ ಮಾವಿನಕಾಯಿ ಈ ಮೂರರಲ್ಲಿ ಯಾವುದಾದರೊಂದು ತರಕಾರಿಯನ್ನು ಹೋಳುಗಳಾಗಿ ಹಚ್ಚಿ ಇಡಿ. ಒಣಮೆಣಸು, ಉದ್ದಿನಬೇಳೆ ಮತ್ತು ಕಪ್ಪುಎಳ್ಳು ಇವೆಲ್ಲವನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಹುರಿದು ತೆಂಗಿನಕಾಯಿ ತುರಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ತರಕಾರಿಯನ್ನು ನೀರು, ಉಪ್ಪು ಬೆಲ್ಲ ಹಾಕಿ ಬೇಯಿಸಿ. ಇದು ಬೆಂದ ನಂತರ ರುಬ್ಬಿಟ್ಟ ಮಸಾಲೆಯನ್ನು ಬೆರೆಸಿ ಕುದಿಸಿರಿ. ನಂತರ ಕರಿಬೇವು ಸೊಪ್ಪು ಹಾಕಿ ಮುಚ್ಚಿ ಒಲೆಯಿಂದ ಕೆಳಗಿರಿಸಿ. ನಂತರ 4 ಚಮಚ ಎಣ್ಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ತಯಾರಿಸಿ ಮೇಣಸ್ಕಾಯಿಗೆ ಒಗ್ಗರಣೆ ಕೊಡಿ. ರುಚಿಯಾದ ಮೆಣಸ್ಕಾಯಿ ರೆಡಿ. ಇದನ್ನು ದೋಸೆ, ಇಡ್ಲಿ ಅಥವಾ ಅನ್ನದ ಜೊತೆ ಸವಿಯಬಹುದು.
ಮಾವಿನಕಾಯಿ ಅಥವಾ ಅಂಬಟೆ ಕಾಯಿ ಮೆಣಸ್ಕಾಯಿಯಾದರೆ ಬೆಲ್ಲ ಸ್ವಲ್ಪ ಜಾಸ್ತಿ ಬೇಕಾಗುತ್ತದೆ. ಇದು ಹುಳಿಯಾಗಿರುವುದರಿಂದ ಕೊಟ್ಟಿರುವ ಪ್ರಮಾಣಕ್ಕಿಂತ ಸ್ವಲ್ಪ ಹೆಚ್ಚು ಬೆಲ್ಲ ಬೆರೆಸಿ. ಇದು ಹುಳಿಸಿಹಿಯಾಗಿ ತಿನ್ನಲು ರುಚಿಯಾಗಿತ್ತದೆ.
ನಿಮ್ಮ ಸ್ನೇಹಿತರಿಗೂ ತಿಳಿಸಿ, ನೀವೂ ಮಾಡಿ ನೋಡಿ
2 comments
Nice dish.
Wow!!!!ma favourite😋😋😋😋😋
EmoticonEmoticon