ಬೇಕಾಗುವ ಸಾಮಾಗ್ರಿಗಳು : -
ಬೆಳ್ತಿಗೆ ಅಕ್ಕಿ - 1 ಲೋಟ
ತೆಂಗಿನ ಕಾಯಿತುರಿ - 1 ಕಪ್
ಸಾಸಿವೆ - 1 ಚಮಚ
ಒಣಮೆಣಸು - 4
ಉಪ್ಪು - ರುಚಿಗೆ ತಕ್ಕಷ್ಟು
ಹುಣಿಸೆಹುಳಿ ನೀರು - ಸ್ವಲ್ಪ
ಬೆಲ್ಲ - ಸಣ್ಣ ತುಂಡು
ಅರಶಿನ ಹುಡಿ - ಸ್ವಲ್ಪ
ಎಣ್ಣೆ - 2 ಚಮಚ
ಕರಿಬೇವು ಸೊಪ್ಪು - 2 ಎಸಳು
ಬೆಳ್ತಿಗೆ ಅಕ್ಕಿ - 1 ಲೋಟ
ತೆಂಗಿನ ಕಾಯಿತುರಿ - 1 ಕಪ್
ಸಾಸಿವೆ - 1 ಚಮಚ
ಒಣಮೆಣಸು - 4
ಉಪ್ಪು - ರುಚಿಗೆ ತಕ್ಕಷ್ಟು
ಹುಣಿಸೆಹುಳಿ ನೀರು - ಸ್ವಲ್ಪ
ಬೆಲ್ಲ - ಸಣ್ಣ ತುಂಡು
ಅರಶಿನ ಹುಡಿ - ಸ್ವಲ್ಪ
ಎಣ್ಣೆ - 2 ಚಮಚ
ಕರಿಬೇವು ಸೊಪ್ಪು - 2 ಎಸಳು
ಮಾಡುವ ವಿಧಾನ : - 1
ಅಕ್ಕಿಯಿಂದ ಬಿಡಿಬಿಡಿಯಾದ ಅನ್ನ ತಯಾರಿಸಿಕೊಳ್ಳಿ. ತೆಂಗಿನಕಾಯಿ ತುರಿ, ಸಾಸಿವೆ ಮತ್ತು ಒಣಮೆಣಸನ್ನು ಮಿಕ್ಸಿಗೆ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ. ಬಾಣಾಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಮೆಣಸು, ಕರಿಬೇವುಸೊಪ್ಪು, ಅರಶಿನ ಹುಡಿ ಇವೆಲ್ಲವನ್ನು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆ ಸಿಡಿದ ನಂತರ ಅದಕ್ಕೆ ರೆಡಿಮಾಡಿಟ್ಟ ಅನ್ನವನ್ನು ಹಾಕಿ ಮಗುಚಿ. ನಂತರ ಉಪ್ಪು, ಹುಣಿಸೆಹುಳಿ ನೀರು ಸ್ವಲ್ಪ ಬೆಲ್ಲ ಮತ್ತು ತೆಂಗಿನಕಾಯಿಯ ರುಬ್ಬಿಟ್ಟ ಮಸಾಲೆಯನ್ನು ಬೆರೆಸಿ ಚೆನ್ನಾಗಿ ಮಗುಚಿ ಒಲೆಯಿಂದ ಕೆಳಗಿರಿಸಿ ಮುಚ್ಚಿಡಿ. ರುಚಿಯಾದ ಚಿತ್ರಾನ್ನ ರೆಡಿ. ಒಗ್ಗರಣೆಗೆ ನೆಲಕಡಲೆಯನ್ನೂ ಹಾಕಬಹುದು.
ಮಾಡುವ ವಿಧಾನ : - 2
ಬಾಣಲೆಯಲ್ಲಿ ಎಣ್ಣೆಹಾಕಿ ಸಾಸಿವೆ, ಮೆಣಸು, ಕರಿಬೇವುಸೊಪ್ಪು, ಅರಶಿನ ಹುಡಿ ಹಾಕಿ ಒಗ್ಗರಣೆ ತಯಾರಿಸಿ. ನಂತರ ಈರುಳ್ಳಿ ಮತ್ತು ಹಸಿಮೆಣಸನ್ನು ಸಣ್ಣಗೆ ಹಚ್ಚಿ ಹಾಕಿ ಮಗುಚಿರಿ. ಈರುಳ್ಳಿ ಬೆಂದ ನಂತರ ಅನ್ನವನ್ನು ಹಾಕಿ ಮಿಶ್ರ ಮಾಡಿ. ಇದಕ್ಕೆ ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ. 2 ಚಮಚದಷ್ಟು ಲಿಂಬೆಹಣ್ಣಿನ ರಸವನ್ನೂ 1 ಚಮಚ ಸಕ್ಕರೆಯನ್ನೂ ಸೇರಿಸಿ ಚೆನ್ನಾಗಿ ಮಗುಚಿರಿ. ಇನ್ನೊಂದು ಬಗೆಯ ಚಿತ್ರಾನ್ನ ರೆಡಿ.
ಮಾಡುವ ವಿಧಾನ : - 3
ಬಾಣಲೆಗೆ ಎಣ್ಣೆಹಾಕಿ ಸಿಪ್ಪೆ ತೆಗೆದ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಹುರಿಯಿರಿ. ನಂತರ ಇದಕ್ಕೆ ಸಾಸಿವೆ, ಒಣಮೆಣಸು, ಕರಿಬೇವುಸೊಪ್ಪು ಅರಶಿನ ಹುಡಿ ಹಾಕಿ. ಸೀಳು ಮಾಡಿದ ಹಸಿಮೆಣಸನ್ನು ಸೇರಿಸಿ ಸ್ವಲ್ಪಹೊತ್ತು ಮಗುಚುತ್ತಾ ಇರಿ. ನಂತರ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರವಾಗುವಂತೆ ಮಗುಚಿ. ಇದಕ್ಕೆ ನೆಲಕಡಲೆಯನ್ನು ಹಾಕಬಹುದು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ತಮ್ಮವರೊಂದಿಗೆ ತಪ್ಪದೇ ಶೇರ್ ಮಾಡಿ.
ಇದರ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಕಮೆಂಟ್ ಹಾಕಿ. ಸಲಹೆ-ಸೂಚನೆಗಳಿದ್ದಲ್ಲಿ ತಿಳಿಸಿ.

2 comments
Supr atte
Yammiii
EmoticonEmoticon