ಶ್ಯಾವಿಗೆಗೆ ಬೇಕಾಗುವ ಸಾಮಾಗ್ರಿಗಳು: -
ತೆಂಗಿನ ಕಾಯಿ - 1 ಕಡಿ
ಉಪ್ಪು - ರುಚಿಗೆ ಬೇಕಷ್ಟು
ಶ್ಯಾವಿಗೆ ಮಾಡುವ ವಿಧಾನ : -
ಬೆಳ್ತಿಗೆ ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ. ನಂತರ ಈ ಅಕ್ಕಿಗೆ ತೆಂಗಿನ ಕಾಯಿ ಮತ್ತು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈ ಹಿಟ್ಟು ದೋಸೆ ಹಿಟ್ಟಿನ ಹದದಷ್ಟು ನಿರಾಗಿರಲಿ. ನಂತರ ಬಾಣಲೆಯಲ್ಲಿ ಈ ಹಿಟ್ಟನ್ನು ಹಾಕಿ ಒಲೆಯಮೇಲೆ ಸಣ್ಣ ಉರಿಯಲ್ಲಿ ಮಗುಚುತ್ತಾ ಇರಿ. ಹಿಟ್ಟು ದಪ್ಪಗಾಗುತ್ತಾ ಬರುತ್ತದೆ. ಈ ಹಿಟ್ಟನ್ನು ಉಂಡೆ ಮಾಡಲು ಬರುವಷ್ಟು ಗಟ್ಟಿಯಾಗುವ ತನಕ ಮಗುಚುತ್ತಾ ಇರಿ. ನಂತರ ಈ ಹಿಟ್ಟನ್ನು ಉಂಡೆಗಳಾಗಿ ಮಾಡಿ ಇಡ್ಲಿ ಬೇಯಿಸಿದಂತೆ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಿ. 10 ನಿಮಿಷಗಳ ಬಳಿಕ ಒಂದೊಂದೇ ಉಂಡೆಗಳನ್ನು ಶ್ಯಾವಿಗೆ ಒತ್ತುವ ಮೆಶಿನ್ನಲ್ಲಿ ಹಾಕಿ ತಿರುಗಿಸಿ. ಶ್ಯಾವಿಗೆ ಮೆಶಿನ್ನ ಕೆಳಭಾಗದಲ್ಲಿ ತಟ್ಟೆಯನ್ನು ಹಿಡಿಯಿರಿ. ಈಗ ಅಕ್ಕಿ ಶ್ಯಾವಿಗೆ ರೆಡಿ. ಇದನ್ನು ಸಾಂಬಾರು ಅಥವಾ ರಸಾಯನ ಬೆರೆಸಿ ತಿನ್ನಲು ಕೊಡಿ.
ಶ್ಯಾವಿಗೆ ಚಿತ್ರಾನ್ನಕ್ಕೆ ಬೇಕಾಗುವ ಸಾಮಾಗ್ರಿಗಳು: -
ಸಾಸಿವೆ - 1 ಚಮಚ
ಒಣಮೆಣಸು - 4
ಕರಿಬೇವುಸೊಪ್ಪು - 2 ಎಸಳು
ಎಣ್ಣೆ - 4 ಚಮಚ
ಎಣ್ಣೆ - 4 ಚಮಚ
ಅಕ್ಕಿ ಶ್ಯಾವಿಗೆಯ ಚಿತ್ರಾನ್ನ ಮಾಡುವ ವಿಧಾನ : -
ಮೇಲೆ ತಯಾರಿಸಿದ ಅಕ್ಕಿ ಶ್ಯಾವಿಗೆಯನ್ನು ಬಿಡಿಬಿಡಿಯಾಗುವಂತೆ ಪುಡಿ ಮಾಡಿ ಇಟ್ಟುಕೊಳ್ಳಿ. ತೆಂಗಿನ ತುರಿ, ಸಾಸಿವೆ ಮತ್ತು ಒಣಮೆಣಸನ್ನು ಮಿಕ್ಸಿಗೆ ಹಾಕಿ ನೀರು ಸೇರಿಸದೇ ರುಬ್ಬಿಟ್ಟುಕೊಳ್ಳಿ. ಬಾಣಲೆಯಲ್ಲಿ ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಉದ್ದಿನಬೇಳೆ, ಕರಿಬೇವು ಸೊಪ್ಪು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆ ಸಿಡಿಯುವಾಗ ಉಪ್ಪು, ಲಿಂಬೆರಸ, 2 ಚಮಚ ಸಕ್ಕರೆ ಮತ್ತು ಅರಶಿನದ ಪುಡಿ ಬೆರೆಸಿ ನಂತರ ಪುಡಿ ಮಾಡಿದ ಶ್ಯಾವಿಗೆಯನ್ನು ಹಾಕಿ ಮಗುಚಿರಿ. ಕೊನೆಯಲ್ಲಿ ರುಬ್ಬಿಟ್ಟ ಮಸಾಲೆಯನ್ನು ಹಾಕಿ ಮಗುಚಿರಿ. ಈಗ ಚಿತ್ರಾನ್ನ ಸವಿಯಲು ರೆಡಿ.


2 comments
Wow😋😋😋😋😋😋
Wow😋😋😋😋😋😋
EmoticonEmoticon