ಬೇಕಾಗುವ ಸಾಮಾಗ್ರಿಗಳು : -ಬೀಟ್ರೂಟ್ – 2
ತೆಂಗಿನಕಾಯಿ ತುರಿ – 1/2ಕಪ್
ಹಸಿಮೆಣಸು – 2
ಉಪ್ಪು – ರುಚಿಗೆ ಬೇಕಷ್ಟು
ಒಗ್ಗರಣೆಗೆ : -
ಎಣ್ಣೆ, ಸಾಸಿವೆ, ಮೆಣಸು, ಉದ್ದಿನ ಬೇಳೆ, ಕರಿಬೇವು ಸೊಪ್ಪು
ಮಾಡುವ ವಿಧಾನ : -
ಬೀಟ್ರೂಟನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹಚ್ಚಿಡಿ. ಹಸಿಮೆಣಸನ್ನು ಸಣ್ಣಗೆ ಹಚ್ಚಿಕೊಳ್ಳಿ. ಒಲೆಯಲ್ಲಿ ಬಾಣಾಲೆ ಇಟ್ಟು ಅದರಲ್ಲಿ ಒಗ್ಗರಣೆ ಸಾಮಾಗ್ರಿಗಳನ್ನು ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆ ಸಿಡಿದ ನಂತರ ಹಚ್ಚಿಟ್ಟ ಹಸಿಮೆಣಸು ಹಾಕಿ ನಂತರ ಕತ್ತರಿಸಿಟ್ಟ ಬೀಟ್ರೂಟನ್ನು ಹಾಕಿ ಮಗುಚಿರಿ. ಇದಕ್ಕೆ ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ಮಗುಚಿ ಬೇಯಲು ಬಿಡಿ. ಕೊನೆಯಲ್ಲಿ ತೆಂಗಿನಕಾಯಿ ತುರಿ ಹಾಕಿ ಮಗುಚಿರಿ. ಈಗ ಪಲ್ಯ ರೆಡಿ.
1 comments so far
Nice.
EmoticonEmoticon