ಬೇಕಾಗುವ ಸಾಮಾಗ್ರಿಗಳು : -ಈರುಳ್ಳಿ – 4
ಮೆಂತೆ – 2 ಚಮಚ
ಒಣಮೆಣಸು – 10
ಉಪ್ಪು – ರುಚಿಗೆ ತಕ್ಕಷ್ಟು
ಹುಣಿಸೆ ಹುಳಿ - ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ - ನೆಲ್ಲಿಕಾಯಿ ಗಾತ್ರದಷ್ಟು
ಎಣ್ಣೆ – 4 ಚಮಚ
ಮಾಡುವ ವಿಧಾನ : -
ಈರುಳ್ಳಿಯನ್ನು ಸಿಪ್ಪೆ ಸುಲಿದು ಸಣ್ಣಗೆ ಕತ್ತರಿಸಿಕೊಳ್ಳಿ. ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಈ ಕತ್ತರಿಸಿಟ್ಟ ಈರುಳ್ಳಿಯನ್ನು ಹುರಿದು ತೆಗೆದಿರಿಸಿ. ಇದೇ ಬಾಣಲೆಗೆ ಮೆಂತೆಯನ್ನು ಹಾಕಿ ಹುರಿದು ಈರುಳ್ಳಿ ಜೊತೆ ಹಾಕಿ. ನಂತರ ಒಣಮೆಣಸನ್ನು ಹುರಿದು ಈರುಳ್ಳಿಯೊಂದಿಗೆ ಸೇರಿಸಿ. ಇದು ತಣಿದ ನಂತರ ಇದಕ್ಕೆ ಉಪ್ಪು, ಹುಳಿ ಮತ್ತು ಬೆಲ್ಲ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಈಗ ರುಚಿಯಾದ ಈರುಳ್ಳಿ-ಮೆಂತೆ ಗೊಜ್ಜು ರೆಡಿ.
ಇದಕ್ಕೆ ನೀರು ಸೇರಿಸಬಾರದು. ನೀರು ಬೆರೆಸದ ಕಾರಣ ಒಂದು ವಾರ ಇಟ್ಟರೂ ಹಾಳಾಗುವುದಿಲ್ಲ. ಈ ಗೊಜ್ಜನ್ನು ಚಪಾತಿಯೊಂದಿಗೆ ಮತ್ತು ದೋಸೆಯೊಂದಿಗೆ ತಿನ್ನಲು ರುಚಿಯಾಗುತ್ತದೆ. ಮೆಂತೆ ಕಹಿ ಇರುವ ಕಾರಣಕ್ಕೆ ಇದಕ್ಕೆ ಬೆಲ್ಲ ಹಾಕಲಾಗುತ್ತದೆ. ಬೆಲ್ಲ ಬೆರೆಸದಿದ್ದರೂ ರುಚಿಯಾಗುತ್ತದೆ.
EmoticonEmoticon