ಬೇಕಾಗುವ ಸಾಮಾಗ್ರಿಗಳು : -ಹಲಸಿನ ಕಾಯಿ
ಉಪ್ಪು – 4 ಚಮಚ
ಮೆಣಸಿನ ಹುಡಿ – 2 ಚಮಚ
ಅರಶಿನದ ಹುಡಿ – 1 ಚಮಚ
ಇಂಗು - ಹುಣಿಸೆ ಬೀಜದಷ್ಟು
ಎಣ್ಣೆ – 1 ಲೀಟರ್
ಮಾಡುವ ವಿಧಾನ : -
ಬಲಿತ ಹಲಸಿನ ಕಾಯಿಯನ್ನು ಹಚ್ಚಿ ಇದರಿಂದ ಹಲಸಿನ ಸೊಳೆಯನ್ನು ಬೇರ್ಪಡಿಸಿ ನಂತರ ಹಲಸಿನ ಸೋಳೆಯನ್ನು ಉದ್ದಕ್ಕೆ ಸೋಂಟೆಯಂತೆ ತೆಳುವಾಗು ಹಚ್ಚಿಡಿ. ಒಂದು ಪಾತ್ರೆಯಲ್ಲಿ ಉಪ್ಪು, ಅರಶಿನದ ಹುಡಿ, ಮೆಣಸಿನ ಹುಡಿ ಮತ್ತು ಇಂಗು ಇವೆಲ್ಲವನ್ನೂ ಸೇರಿಸಿ 1/2 ಲೋಟ ನೀರು ಹಾಕಿ ಕಲಕಿ ಇಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿರಿಸಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾದ ನಂತರ 2-3 ಹಿಡಿಯಷ್ಟು ಹಚ್ಚಿಟ್ಟ ಹಲಸಿನ ಸೋಳೆಯನ್ನು ಅದರಲ್ಲಿ ಹಾಕಿ ಕಾಯಿಸಿ. ಅರ್ಧ ಕಾಯುತ್ತಿರುವಾಗ ಕಲಸಿಟ್ಟ ಉಪ್ಪು, ಮೆಣಸಿನ ಹುಡಿ ಬೆರೆಸಿಟ್ಟ ನೀರನ್ನು ಸ್ವಲ್ಪ ಸ್ವಲ್ಪವೇ ಚಿಮಕಿಸಿ. ನಂತರ ಸೋಂಟೆ ಸರಿಯಾಗಿ ಕಾಯುವ ತನಕ ಮಗುಚುತ್ತಾ ಇರಿ. ಕಾದ ನಂತರ ಎಣ್ಣೆಯಿಂದ ತೆಗೆದು ಪೇಪರಿನ ಮೇಲೆ ಹರಡಿ. ತಣಿದ ಬಳಿಕ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಿಡಿ. ಈಗ ರುಚಿಯಾದ ಸೋಂಟೆ ತಿನ್ನಲು ರೆಡಿ.
EmoticonEmoticon